ಪುಟಗಳು

ಭಾನುವಾರ, ಜುಲೈ 20, 2014

ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮ

                            ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯಕ್ರಮ

 

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಗೋಪಾಲ ಶೆಟ್ಟಿ ಇವರಿಂದ ಕಾರ್ಯಕ್ರಮದ ಉದ್ಘಾಟನೆ

  ದಿನಾಂಕ:09/07/2014ರಂದು ಕುಂದಾಪುರ ವಲಯದ ಸಮಾಜ ವಿಜ್ಞಾನ ಶಿಕ್ಷಕರ ಒಂದು ದಿನದ ಪುನಶ್ಚೇತನ ಕಾರ್ಯಕ್ರಮವು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ವಲಯ  , ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ಕುಂದಾಪುರ ವಲಯ ,ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ (ಪ್ರೌಢಶಾಲಾ ವಿಭಾಗ)&ರೋಟರಿ ಕ್ಲಬ್ ಕುಂದಾಪುರ ಇವರ ಸಹಯೋಗದಲ್ಲಿ,  ಸರಕಾರಿ ಪದವಿ ಪೂರ್ವ ಕಾಲೇಜಿನ   ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗೋಪಾಲ ಶೆಟ್ಟಿ ಇವರು  ವಿಷಯ ಸಂಪನ್ಮೂಲ ಚಟುವಟಿಕೆಗೆ ಶುಭ ಹಾರೈಸಿದರು.ರೋಟರಿ ಕ್ಲಬ್ ವತಿಯಿಂದ ಈ ವರ್ಷ "ಲಿಟರಸಿ'ಆಧಾರಿತ ಕಾರ್ಯಕ್ರಮಕ್ಕೆ ಹೆಚ್ಚಿನ ನೆರವಿನ ಭರವಸೆ ನೀಡಿದರು. ರೋಟರಿ ಕ್ಲಬ್ ಕುಂದಾಪುರ ಇದರ ಅಧ್ಯಕ್ಷರಾದ ಮನೋಜ್ ಇವರು  ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಶ್ರೀ ಭಾಸ್ಕರ್ ಜಿ ಶೇಟ್ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉದಯ್ ಗಾಂವಕರ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ತರಗತಿಯಲ್ಲಿ ಮಗುವಿನ ಭಾಗವಹಿಸುವಿಕೆ ಮುಖ್ಯವಾಗಿದ್ದು ಇದಕ್ಕಾಗಿ NCF-2005ರ ಆಧಾರದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ಸಾಧ್ಯತೆ ಬಗ್ಗೆ  ಮಾಹಿತಿ ನೀಡಿದರು.   ಶಿಕ್ಷಣ ತಜ್ಞ ಶ್ರೀ  H  ಕೃಷ್ಣಶಾಸ್ತ್ರಿ ಬಾಳಿಲ ಇವರು ಸಮಾಜ ವಿಜ್ಞಾನ ಪುನಶ್ಚೇತನ ಕಾರ್ಯದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಸಮಾಜ ವಿಜ್ಞಾನ ವಿಷಯ ವೇದಿಕೆ ಕಾರ್ಯದರ್ಶಿ,ಸರಕಾರಿ ಪ್ರೌಢಶಾಲೆ ಕೋಣಿ ಇಲ್ಲಿನ ಸಮಾಜ ವಿಜ್ಞಾನ ಸಹಶಿಕ್ಷಕರೂ ಆಗಿರುವ ಶ್ರೀ  ಸದಾನಂದ  ಬೈಂದೂರು ಇವರು ಸ್ವಾಗತಿಸಿ, ನಿರೂಪಿಸಿದರು.

ಶ್ರೀ ಉದಯ ಕುಮಾರ್ ಶೆಟ್ಟಿ ಸಹಶಿಕ್ಷಕರು ಸಂಜಯ ಗಾಂಧಿ ಪ್ರೌಢಶಾಲೆ ಅಂಪಾರು ಇವರು ವಂದಿಸಿದರು. ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ 50ಕ್ಕೂ ಹೆಚ್ಚು ಸಮಾಜ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.

ಎಡದಿಂದ ಬಲಕ್ಕೆ:ಶ್ರೀ ಭಾಸ್ಕರ್ ಶೇಟ್(ಉಪಪ್ರಾಂಶುಪಾಲರು,ಸ.ಪ.ಪೂ.ಕುಂದಾಪುರ),ಶ್ರೀ ಮನೋಜ್(ರೋಟರಿ ಅಧ್ಯಕ್ಷರು),ಶ್ರೀ ಗೋಪಾಲ ಶೆಟ್ಟಿ(ಕ್ಷೇತ್ರ ಶಿಕ್ಷಣಾಧಿಕಾರಿಗಳು),ಶ್ರೀ ಕೃಷ್ಣಶಾಸ್ತ್ರಿ ಬಾಳಿಲ

ನಂತರ ನಡೆದ ಪುನಶ್ಚೇತನ ಕಾರ್ಯದಲ್ಲಿ ಸಮಾಜ ವಿಜ್ಞಾನ ಶಿಕ್ಷಕರ ತರಗತಿ ಬೋಧನೆ&ವಿಷಯ ಪ್ರಭುತ್ವದ ಬಗ್ಗೆ ಶ್ರೀ ಕೃಷ್ಣಶಾಸ್ತ್ರಿ ಬಾಳಿಲ ಇವರು ಸಾಕಷ್ಟು ಮಾಹಿತಿ ನೀಡಿದರು.ಕಾರ್ಯಕ್ರಮದ ಎರಡನೇ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಉಡುಪಿ ಇಲ್ಲಿನ ಶಿಕ್ಷಣಾಧಿಕಾರಿ ಶ್ರೀ ಅಶೋಕ್ ಕಾಮತ್ ಇವರು ಹತ್ತನೇ ತರಗತಿಯ ಬದಲಾದ ಪರೀಕ್ಷಾ ಪದ್ಧತಿ ಬಗ್ಗೆ &ಮುಂದಿನ ದಿನದಲ್ಲಿ ಹೆಚ್ಚಿನ ತರಬೇತಿಯ ಬಗ್ಗೆ  ಮಾಹಿತಿ ನೀಡಿದರು.


ಸಂಪನ್ಮೂಲ ವ್ಯಕ್ತಿಯೊಂದಿಗೆ ಶಿಕ್ಷಕರು.

ವರದಿ:ಭಾಗ್ವತ್
ಸ.ಶಿ.ಸ.ಪ್ರೌ.ಶಾ.ಕೆದೂರು

2 ಕಾಮೆಂಟ್‌ಗಳು: